ಪದವೀಧರರಿಗೆ ಸಿಹಿ ಸುದ್ದಿ- IOB ಬ್ಯಾಂಕಿನಲ್ಲಿ 400 ಹುದ್ದೆಗಳಿಗೆ ನೇಮಕಾತಿ

28th May 2025
Govt Job
IOB Bank
Recruitment
Jobs
Govt Jobs
IOB 400 Posts
Banking Jobs
Online Application
Karnataka Jobs
Last updated:31st May 2025
1 Minutes
134 Words

ಇಂಡಿಯನ್ ಓವರ್ಸೀಸ್ ಬ್ಯಾಂಕ್(IOB) 400 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು IOB ಬ್ಯಾಂಕಿನ ಅಧಿಕೃತ ವೆಬ್‌ಸೈಟ್ iob.in ಗೆ ಭೇಟಿ ನೀಡುವ ಮೂಲಕ ಮೇ 31 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳನ್ನು ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ಮತ್ತು ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಹುದ್ದೆಗಳ ವಿವರಗಳು

IOB 400 ಸ್ಥಾನಗಳನ್ನು ವಿವಿಧ ರಾಜ್ಯಗಳಲ್ಲಿ ನಿಯೋಜಿಸಲು ಯೋಜಿಸಿದೆ. ಹುದ್ದೆಗಳನ್ನು ತಮಿಳುನಾಡಿಗೆ 260, ಒಡಿಶಾಗೆ 10, ಮಹಾರಾಷ್ಟ್ರಕ್ಕೆ 45, ಗುಜರಾತ್‌ಗೆ 30, ಪಶ್ಚಿಮ ಬಂಗಾಳಕ್ಕೆ 34 ಮತ್ತು ಪಂಜಾಬ್‌ಗೆ 21 ಹುದ್ದೆಗಳಿಗೆ ಹಂಚಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶಾದ್ಯಾಂತ ವಿವಿಧ IOB ಶಾಖೆಗಳಲ್ಲಿ ನಿಯೋಜಿಸಲ್ಪಡುತ್ತಾರೆ.

ವಿದ್ಯಾರ್ಹತೆ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 20 ರಿಂದ 30 ವರ್ಷಗಳ ನಡುವೆ ಇರಬೇಕು (31 ಮೇ 2025 ರವರೆಗೆ). SC/ST, OBC ಮತ್ತು ಅಂಗವಿಕಲ ಅರ್ಜಿದಾರರಿಗೆ ವಯೋಮಿತಿಯಲ್ಲಿ ಸಡಿಲಿಕೆಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ವರ್ಗದ ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕವಿರುತ್ತದೆ.

ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆ ಮೂರು ಹಂತಗಳನ್ನು ಒಳಗೊಂಡಿರುತ್ತದೆ:

  1. ಆನ್‌ಲೈನ್ ಪರೀಕ್ಷೆ
  2. ಭಾಷಾ ಪ್ರಾವೀಣ್ಯತೆ ಪರೀಕ್ಷೆ
  3. ಸಂದರ್ಶನ

ಪ್ರಮುಖ ದಿನಾಂಕಗಳು

ಅರ್ಜಿ ಪ್ರಾರಂಭ ದಿನಾಂಕ: 12 ಮೇ 2025

ಕೊನೆಯ ದಿನಾಂಕ: 31 ಮೇ 2025

Article title:ಪದವೀಧರರಿಗೆ ಸಿಹಿ ಸುದ್ದಿ- IOB ಬ್ಯಾಂಕಿನಲ್ಲಿ 400 ಹುದ್ದೆಗಳಿಗೆ ನೇಮಕಾತಿ
Release time:28th May 2025