ಮಂಗಳೂರು ಕಥೋಲಿಕ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮಂಗಳೂರು ತಮ್ಮ ಆಡಳಿತಾಧಿಕಾರಿ ಕಚೇರಿ, ಹ್ಯಾಂಪಂಕ್ಅಟ್ಟ, ಮಂಗಳೂರು-575 001 ಇಂದ 10 ಖಾಲಿ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ/ಕೋರಿಯರ್ ಮೂಲಕ 2025 ಮೇ 26 ರಿಂದ ಜೂನ್ 9ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕಾಗುತ್ತದೆ.
ಹುದ್ದೆಗಳ ವಿವರಗಳು
- ಹಿರಿಯ ಸಹಾಯಕ (Senior Assistant): 2 ಹುದ್ದೆಗಳು
- ಕಿರಿಯ ಸಹಾಯಕ (Junior Assistant): 8 ಹುದ್ದೆಗಳು
- ಒಟ್ಟು ಹುದ್ದೆಗಳು: 10
ವೇತನ ಶ್ರೇಣಿ
- ಹಿರಿಯ ಸಹಾಯಕ: ₹21600-600-24600-700-28800-800-33600-900-39000-1050-40050
- ಕಿರಿಯ ಸಹಾಯಕ: ₹20000-500-21000-600-24600-700-28800-800-33600-900-36300
ವೇತನ ಶ್ರೇಣಿಯ ಜೊತೆಗೆ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಪ್ರಾವಿಡೆಂಟ್ ಫಂಡ್, ಗ್ರಾಡ್ಯೂಟಿ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತದೆ.
ವಿದ್ಯಾರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು.
- ಕನ್ನಡದಲ್ಲಿ ವ್ಯವಹಾರ ಜ್ಞಾನ ಹೊಂದಿರಬೇಕು, ಓದಲು ಮತ್ತು ಬರೆಯಲು ಸಾಧ್ಯವಾಗಬೇಕು.
- ಕಂಪ್ಯೂಟರ್‌ನಲ್ಲಿ ಅಗತ್ಯ ಕೌಶಲ್ಯಗಳು ಹೊಂದಿರಬೇಕು.
- ಬ್ಯಾಂಕಿಂಗ್ ವಲಯದಲ್ಲಿ ಕೆಲಸದ ಅನುಭವವಿರುವವರಿಗೆ ಆದ್ಯತೆ ನೀಡಲಾಗುತ್ತದೆ.
- ಇತ್ತೀಚಿನ ಬ್ಯಾಂಕಿಂಗ್ ಮಾಹಿತಿ ಮತ್ತು ತಂತ್ರಜ್ಞಾನ ಜ್ಞಾನ ಅಗತ್ಯವಿದೆ.
ವಯೋಮಿತಿ
ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಇರಬೇಕು (09.06.2025 ರ ಪ್ರಕಾರ):
- ಪರಿಶಿಷ್ಟ ಜಾತಿ/ಪಂಗಡ/ವರ್ಗ-1: ಗರಿಷ್ಠ 40 ವರ್ಷ
- ಹಿಂದುಳಿದ ವರ್ಗಗಳು (2A, 2B, 3A, 3B): ಗರಿಷ್ಠ 38 ವರ್ಷ
- ಸಾಮಾನ್ಯ ವರ್ಗ: ಗರಿಷ್ಠ 35 ವರ್ಷ
ಬ್ಯಾಂಕ್ ಸೇವೆಯಲ್ಲಿ ಇರುವ ಅಥವಾ ಗುತ್ತಿಗೆ ಆಧಾರದ ಉದ್ಯೋಗಿಗಳಿಗೆ ಸಹಕಾರ ಸಂಘ ನಿಯಮಾನುಸಾರ ವಿನಾಯಿತಿಗಳು ಅನ್ವಯವಾಗಬಹುದು.
ಆಯ್ಕೆ ಪ್ರಕ್ರಿಯೆ
ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ.
ಲಿಖಿತ ಪರೀಕ್ಷೆ (200 ಅಂಕ):
- ಕನ್ನಡ ಭಾಷೆ – 50 ಅಂಕ
- ಸಾಮಾನ್ಯ ಇಂಗ್ಲಿಷ್ – 25 ಅಂಕ
- ಸಾಮಾನ್ಯ ಜ್ಞಾನ – 25 ಅಂಕ
- ಸಹಕಾರ ವಿಷಯಗಳು – 50 ಅಂಕ
- ಭಾರತ ಸಂವಿಧಾನ – 25 ಅಂಕ
- ಬ್ಯಾಂಕಿಂಗ್ ಚಟುವಟಿಕೆಗಳು – 25 ಅಂಕ
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: 26 ಮೇ 2025
- ಕೊನೆಯ ದಿನಾಂಕ: 9 ಜೂನ್ 2025
ಪ್ರಮುಖ ಲಿಂಕ್‌ಗಳು
- ಅಧಿಕೃತ ವೆಬ್ಸೈಟ್: www.mccbank.in
- Notification : Click Here
- Form : Click Here